Author: admin

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಎಲ್ಲಾ ಉದ್ದಿಮೆ ಮಾಲೀಕರು ತಮ್ಮ ಉದ್ದಿಮೆಗೆ ಉದ್ದಿಮೆ ರಹದಾರಿ/ಪರವಾನಿಗೆಯನ್ನು ಪಡೆಯಲು ಆನ್ ಲೈನ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಮಹಾನಗರಪಾಲಿಕೆಯು OASIS ತಂತ್ರಾಂಶವನ್ನು ರದ್ದುಗೊಳಿಸಿ ವ್ಯಾಪಾರ ತಂತ್ರಾಂಶದ ಮೂಲಕ ಉದ್ದಿಮೆ ರಹದಾರಿ/ಪರವಾನಿಗೆಯನ್ನು ವಿತರಿಸಲು ಕ್ರಮ ವಹಿಸಿದ್ದು, ಆಸಕ್ತ ಉದ್ದಿಮೆದಾರರು ಆಧಾರ್ ಕಾರ್ಡ್/ ಡ್ರೈವಿಂಗ್ ಲೈಸೆನ್ಸ್/ ಪಾಸ್ಪೋರ್ಟ್/ ವೋಟರ್ ಐಡಿ/ ಪಡಿತರ ಚೀಟಿ ಇವುಗಳಲ್ಲಿ ಯಾವುದಾದರೂ ಒಂದು ದಾಖಲೆಯೊಂದಿಗೆ ಆನ್ ಲೈನ್ http://www.tumakurucity.mrc.gov.in ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ವಲಯ ಕಚೇರಿಯ ವಲಯ ಆಯುಕ್ತರು ಹಾಗೂ ಆರೋಗ್ಯ ನಿರೀಕ್ಷಕರನ್ನು ಸಂಪರ್ಕಿಸಬೇಕೆಂದು ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ತುಮಕೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕ್ರೀಡಾ ವಸತಿ ನಿಲಯದ ಪ್ರತಿಭಾವಂತ ಕ್ರೀಡಾಪಟುಗಳಿಗೆ ವೈಜ್ಞಾನಿಕವಾಗಿ ಫಿಟ್ನೆಸ್ ತರಬೇತಿ ನೀಡಲು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ತರಬೇತುದಾರರಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಯು ಒಂದು ವರ್ಷದ ಅವಧಿಯದ್ದಾಗಿದ್ದು, ತಾತ್ಕಾಲಿಕವಾಗಿದೆ. ಆಯ್ಕೆಯಾದವರಿಗೆ ಮಾಸಿಕ ಸಂಚಿತ ವೇತನ ನೀಡಲಾಗುವುದು.ನಿಗದಿತ ಅರ್ಜಿ ನಮೂನೆಯನ್ನು ಇಲಾಖೆಯ ವೆಬ್ ಸೈಟ್ dyes.karnataka.gov.in ನಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಏಪ್ರಿಲ್ 15ರೊಳಗಾಗಿ ಮಹಾನಿರ್ದೇಶಕರು, ಕರ್ನಾಟಕ ಕ್ರೀಡಾ ಪ್ರಾಧಿಕಾರ, ರಾಜ್ಯ ಯುವಕೇಂದ್ರ, ನೃಪತುಂಗರಸ್ತೆ, ಬೆಂಗಳೂರು–560001 ಇವರಿಗೆ ಸಲ್ಲಿಸಬೇಕು. ಅರ್ಜಿ ಲಕೋಟೆಯ ಮೇಲೆ “ಮಾಸಿಕ ಸಂಚಿತ ವೇತನ, ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಯವರೆಗೆ ಫಿಟ್ನೆಸ್ ತರಬೇತುದಾರರ ಹುದ್ದೆಯ ನೇಮಕಾತಿಗಾಗಿ ಅರ್ಜಿಯನ್ನು ಸಲ್ಲಿಸಲಾಗುತ್ತಿದೆ” ಎಂಬ ಮೇಲು ಬರಹದೊಂದಿಗೆ ಮೊಹರಾದ ಲಕೋಟೆಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾತ್ಮಗಾಂಧಿ ಕ್ರೀಡಾಂಗಣ, ತುಮಕೂರು ಅಥವಾ ಮೊ.ಸಂ. 9741691379ನ್ನು ಸಂಪರ್ಕಿಸಬಹುದೆAದು ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್…

Read More

ತುಮಕೂರು: ತುಮಕೂರು ತಾಲ್ಲೂಕು, ಕಸಬಾ ಹೋಬಳಿ, ಸ್ವಾಂದೇನಹಳ್ಳಿ ಬೆಟ್ಟದ ಮೇಲಿರುವ (ದೇವರಾಯನ ದುರ್ಗದ ಅರಣ್ಯ ಪ್ರದೇಶ) ಶ್ರೀ ರಂಗನಾಥಸ್ವಾಮಿಯವರ ಬ್ರಹ್ಮರಥೋತ್ಸವನ್ನು ಸ್ವಾಂದೇನಹಳ್ಳಿ ಗ್ರಾಮದಲ್ಲಿ ಏಪ್ರಿಲ್ 6ರಂದು ಮಧ್ಯಾಹ್ನ 1.58 ರಿಂದ 2.50 ಗಂಟೆಯೊಳಗೆ ನಡೆಸಲಾಗುವುದು. ರಥೋತ್ಸವದ ದಿನದಂದು ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಏಪ್ರಿಲ್ 5 ರಿಂದ 9ರವರೆಗೆ ಶ್ರೀ ರಂಗನಾಥಸ್ವಾಮಿಯವರ ಜಾತ್ರೆ ನಡೆಯಲಿದ್ದು, ಜಾತ್ರೆಯ ಪ್ರಯುಕ್ತ ಏ.5ರಂದು ವಿಷ್ಣುಕ್ಷೇನ ದೇವತಾರಾಧನ ಪೂರ್ವಕ ಸ್ವಸ್ತಿ ಪುಣ್ಯಾಹವಾಚನ, ಅಂಕುರಾರೋಹಣ ಬೆಟ್ಟದ ಮೇಲೆ ಧ್ವಜಾರೋಹಣ, ಕಲ್ಯಾಣೋತ್ಸವ, ಶ್ರೀ ದೊಡ್ಡಯ್ಯಸ್ವಾಮಿ ಮತ್ತು ಶ್ರೀರಂಗನಾಥಸ್ವಾಮಿಯವರಿಗೆ ಪಂಚಾಮೃತಾಭಿಷೇಕ ಸೇವೆಗಳು ಜರುಗಲಿವೆ. ಏ.6ರಂದು ರಾತ್ರಿ ರಥೋತ್ಸವ, ಗರುಡೋತ್ಸವ, ಶೇಷವಾಹನೋತ್ಸವ, ಧವನೋತ್ಸವ; ಏ.7ರಂದು ಉತ್ಸವ ಹಾಗೂ ರಾತ್ರಿ 8 ಗಂಟೆಗೆ ಸ್ವಾಂದೇನಹಳ್ಳಿ ಶ್ರೀ ರಂಗನಾಥಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಭಗವದ್ಗೀತೆ ಅಥವಾ ಶ್ರೀ ಕೃಷ್ಣ ಸಂಧಾನ ಎಂಬ ಪೌರಾಣಿಕ ನಾಟಕ ನಡೆಯಲಿದೆ. ಏ.8ರಂದು ಉತ್ಸವ ಹಾಗೂ ಏ.9ರಂದು ಧ್ವಜಾರೋಹಣ, ಕಂಕಣ ವಿಸರ್ಜನೆ ಮತ್ತಿತರ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಬ್ರಹ್ಮರಥೋತ್ಸವದ ಅಂಗವಾಗಿ…

Read More

ತುಮಕೂರು: ತಾಲ್ಲೂಕಿನ ಕಸಬಾ ಹೋಬಳಿ ಹಾಲನೂರು ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಮಲ್ಲೇಶ್ವರ ಸ್ವಾಮಿ, ಪಾರ್ವತಾದೇವಿ ಜಾತ್ರಾ ಮಹೋತ್ಸವ ಏ.8 ರಿಂದ ಏ.16ರವರೆಗೆ 9 ದಿನಗಳ ಕಾಲ ನಡೆಯಲಿದೆ. ಜಿಲ್ಲಾಧಿಕಾರಿ ಶುಭ ಕಲ್ಯಾಣ್,ತಹಶೀಲ್ದಾರ್ ರಾಜೇಶ್ವರಿ,ಮುಜರಾಯಿ ಇಲಾಖೆ ಹಾಗೂ ಭಕ್ತಮಂಡಲಿ,ಹಾಲನೂರು ಗ್ರಾಮದ ಯಜಮಾನರು,ಗ್ರಾಮಸ್ಥರ ನೇತೃತ್ವದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವ ಏ.8 ರಂದು ಮಂಗಳವಾರ ಸಂಜೆ ಧ್ವಜಾರೋಹಣದೊಂದಿಗೆ ಚಾಲನೆಗೊಳ್ಳಲಿದೆ. ಏ.9 ರಂದು ಗ್ರಾಮದ ಎಲ್ಲಾ ಮನೆಗಳಿಂದ ಆರತಿಗಳು ಬರಲಿವೆ.ನಂತರ ಗಿರಿಜಾ ಕಲ್ಯಾಣ ನಡೆಯಲಿದೆ. ಏ.10 ತ್ರಯೋದಶಿ ಗುರುವಾರ ಮಧ್ಯಾಹ್ನ 12:45 ಕ್ಕೆ ಬ್ರಹ್ಮ ರಥೋತ್ಸವ ನಡೆಯಲಿದೆ.ಬೆಳ್ಳಾವಿ ಮಠದ ಶ್ರೀ ಕಾರದ ವೀರಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.ಏ.11 ರಂದು ಸಂಜೆ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಅದಲಾಪುರ ಮಹಾಲಕ್ಷ್ಮೀ ದೇವಿ ಮೆರವಣಿಗೆ ನೆರವೇರಲಿದೆ.ರಂಗೋಲಿ ಸ್ಪರ್ಧೆ ಸಹ ಏರ್ಪಡಿಸಲಾಗಿದೆ. ಏ.12 ರಂದು ಹುಣ್ಣಿಮೆ ಶನಿವಾರದಂದು ಜಾತ್ರೆಯ ಮುಖ್ಯ ಆಕರ್ಷಣೆ ಉಪ್ಪರಿಗೆ ವಾಹನ ಉತ್ಸವ ನಡೆಯಲಿದ್ದು,ಅಂದು ರಾತ್ರಿ ಶ್ರೀ ಮಲ್ಲೇಶ್ವರ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಕುರುಕ್ಷೇತ್ರ ನಾಟಕ…

Read More

ತುಮಕೂರು: ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಪ್ರಾರಂಭಿಕವಾಗಿ ನೋಂದಾಯಿಸಲಾಗುತ್ತಿದ್ದ 26 ಅಸಂಘಟಿತ ಕಾರ್ಮಿಕರ ಪಟ್ಟಿಗೆ ಹೊಸದಾಗಿ 65 ವರ್ಗಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿ ತೇಜಾವತಿ ತಿಳಿಸಿದ್ದಾರೆ. ಈ ಹಿಂದೆ ಪ್ರಾರಂಭಿಕವಾಗಿ ಹಮಾಲ, ಟೈಲರ್, ಗೃಹ ಕಾರ್ಮಿಕ, ಅಗಸ, ಚಿಂದಿ ಆಯುವ, ಅಕ್ಕಸಾಲಿಗ, ಕಮ್ಮಾರ, ಕುಂಬಾರ, ಕ್ಷೌರಿಕ, ಭಟ್ಟಿಕಾರ್ಮಿಕ, ಸಿನಿ ಕಾರ್ಮಿಕ, ನೇಕಾರ, ಬೀದಿಬದಿ ವ್ಯಾಪಾರಿ, ಹೋಟೆಲ್ ಕಾರ್ಮಿಕ, ಫೋಟೋಗ್ರಾಫರ್, ಸ್ವತಂತ್ರ ಲೇಖನ ಬರಹಗಾರ, ಬೀಡಿ ಕಾರ್ಮಿಕ, ಅಸಂಘಟಿತ ವಿಕಲಚೇತನ ಕಾರ್ಮಿಕ, ಅಲೆಮಾರಿ ಪಂಗಡದ ಕಾರ್ಮಿಕ, ಹಗ್ಗ ಸಿದ್ದಪಡಿಸುವ (ಬೈಜಂತ್ರಿ) ಕಾರ್ಮಿಕ, ಉಪ್ಪನ್ನು ತಯಾರಿಸುವ ಉಪ್ಪಾರ, ಬಿದಿರು ವೃತ್ತಿಯಲ್ಲಿರುವ ಮೇದಾರ, ಚಪ್ಪಲಿ ತಯಾರಿಕೆ ಮತ್ತು ರಿಪೇರಿ ಮಾಡುವ ಕಾರ್ಮಿಕ, ಕೇಬಲ್ ಕಾರ್ಮಿಕ, ಕಲ್ಯಾಣ ಮಂಟಪ/ ಸಭಾ ಭವನ/ ಟೆಂಟ್/ ಪೆಂಡಾಲ್ಗಳ ಕಾರ್ಮಿಕ, ಗಾದಿ/ ಹಾಸಿಗೆ/ ದಿಂಬು ತಯಾರಿಕಾ ಕಾರ್ಮಿಕ(ಪಿಂಜಾರರು/ ನದಾಫರು)ರು ಸೇರಿ 26 ಅಸಂಘಟಿತ ಕಾರ್ಮಿಕರನ್ನಾಗಿ ನೋಂದಾಯಿಸಲಾಗುತ್ತಿತ್ತು. ಇದರೊಂದಿಗೆ ಪ್ರಸ್ತುತ ಅಸಂಘಟಿತ ಕಾರ್ಮಿಕರ ಪಟ್ಟಿಗೆ ಹೊಸದಾಗಿ ಹಿಂದುಳಿದ ವರ್ಗಗಳ ಪ್ರವರ್ಗ-1,…

Read More

ತುಮಕೂರು:  ಪ್ರವಾಸೋದ್ಯಮ ಇಲಾಖೆಯು ಜಿಲ್ಲೆಯ ಪ್ರವಾಸಿ ತಾಣಗಳಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಚಾರವನ್ನು ನೀಡಲು ದೇಖೋ ಅಪ್ನಾ ದೇಶ್ ಫೋಟೋ ಸ್ಪರ್ಧೆ–2025ನ್ನು ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಛಾಯಾಗ್ರಾಹಕರು/ ಸಾರ್ವಜನಿಕರು/ಪ್ರವಾಸಿಗರಿಂದ ಛಾಯಾಚಿತ್ರಗಳನ್ನು ಆಹ್ವಾನಿಸಿದೆ. ಆಸಕ್ತರು ತುಮಕೂರು ಜಿಲ್ಲೆಯ ಪ್ರಮುಖ ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ, ಕರಕುಶಲ, ನೈಸಿರ್ಗಿಕ ಹಾಗೂ ವನ್ಯ ಜೀವಗಳು ಮತ್ತು ಇತರೆ ಪ್ರವಾಸಿ ತಾಣಗಳ ಅತ್ಯಾಕರ್ಷಕ ಛಾಯಚಿತ್ರಗಳನ್ನು ಸೆರೆಹಿಡಿದು, ಪ್ರವಾಸಿ ತಾಣಗಳ ಕಿರು ವಿವರಣೆಯೊಂದಿಗೆ ವಿ–ಅಂಚೆ Dekhoapnadeshphotos@gmail.com ಮೂಲಕ ಏಪ್ರಿಲ್ 7ರೊಳಗೆ ನೇರವಾಗಿ ಕಳುಹಿಸಬಹುದಾಗಿದೆ. ಆಸಕ್ತರು ಸ್ಮಾರಕ (Monument)), ವನ್ಯಜೀವಿ (Wild life), ಜಿಐ ಟ್ಯಾಗ್ ಹಾಗೂ ಕರಕುಶಲ ವಸ್ತುಗಳು ಮತ್ತು ಕೈಮಗ್ಗಗಳು (GI tag handicraft & handlooms) ಭೂದೃಶ್ಯ ((Landscape) ಹಾಗೂ ಸಾಹಸ (Adventure) ವಿಭಾಗಗಳ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ವರಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…

Read More

ತುಮಕೂರು: ನಗರದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತ ಹಾಗೂ ವಿಜ್ಞಾನ ವಿಭಾಗದ ಸಂಯೋಗದೊಂದಿಗೆ ತುಮಕೂರು ವಿಶ್ವವಿದ್ಯಾನಿಲಯ ಮಟ್ಟದ ಒಂದು ದಿನದ ಜಾಮ್ ಮತ್ತು ಐ.ಬಿ.ಪಿ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗಲು ವಿವಿಧ ಕಾಲೇಜು ಪದವಿ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದ ತುಮಕೂರು ವಿ.ವಿ. ಪರೀಕ್ಷಾಂಗದ ಉಪ ಕುಲಸಚಿವರಾದ ಡಾ.ನರಹರಿ ಎನ್. ಅವರು ಮಾತನಾಡಿ, ದೇಶದಲ್ಲಿ ಇಂದು ಒಂದು ಸರ್ಕಾರಿ ಉದ್ಯೋಗ ಪಡೆಯಲು ಹರಸಾಹಸ ಪಡುವಂತಾಗಿದೆ. ಜನಸಂಖ್ಯಾ ಸ್ಪೋಟದಿಂದ ಉದ್ಯೋಗಾಂಕ್ಷಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿರುವದರಿಂದ ಹಾಗೂ ಒಂದು ಹುದ್ದೆಗೆ ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದಾಗ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಸಾಹಸದ ಕೆಲಸವಾಗಿದೆ. ಆದ್ದರಿಂದ ಸರ್ಕಾರಗಳು ವಿವಿಧ ಉದ್ಯೋಗ ಪಡೆಯಬಯಸುವವರಿಗಾಗಿ ಜಾಮ್ ಮತ್ತು ಐ.ಬಿ.ಪಿ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದು ಇಂದು ಅನಿವಾರ್ಯವೂ ಆಗಿದೆ. ವಿವಿಧ ಕಾಲೇಜು ಪದವಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಈ ಕಾರ್ಯಾಗಾರವನ್ನು ಏರ್ಪಡಿಸಿರುವುದು ನನಗೆ ಸಂತಸ ತಂದಿದೆ. ವಿದ್ಯಾರ್ಥಿಗಳು…

Read More

ಬೆಂಗಳೂರು: ಬಿಜೆಪಿ ಕಾರ್ಯಕರ್ತರೊಬ್ಬರು ಬೆಂಗಳೂರಿನ ನಾಗವಾರದ ಬಿಜೆಪಿ ಪಕ್ಷದ ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ವಿನಯ್ ಸೋಮಯ್ಯ (35) ಆತ್ಮಹತ್ಯೆ ಮಾಡಿಕೊಂಡ ಕಾರ್ಯಕರ್ತರಾಗಿದ್ದು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ವಿರುದ್ಧ ಅಪಹಾಸ್ಯ ಮಾಡಿ ವಾಟ್ಸಪ್ ಪೋಸ್ಟ್ ಮಾಡಿದ್ದ ವಿನಯ್ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಎ ಎಸ್ ಪೊನ್ನಣ್ಣ ಬಗ್ಗೆ ಅಪಹಾಸ್ಯ ಮಾಡಿ ವಾಟ್ಸಪ್ ಪೋಸ್ಟ್ ಮಾಡಿದ್ದ ವಿನಯ್ ವಿರುದ್ಧ ಕಾಂಗ್ರೆಸ್ ಮುಖಂಡ ತನ್ನೀರ ಮೈನಾ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿನಯ್ ಸೋಮಯ್ಯ ಅವರನ್ನು ಪೊಲೀಸರು ಎರಡು ತಿಂಗಳ ಹಿಂದೆ ಬಂಧಿಸಿದ್ದರು. ಬಂಧನದ ಬಳಿಕ ಈ ಘಟನೆಯಿಂದ ವಿನಯ್ ಬಹಳ ನೊಂದಿದ್ದರು ಎನ್ನಲಾಗಿದೆ. ಕಾರ್ಯಕರ್ತನ ಸಾವಿನ ಬಗ್ಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಹಿತಿ ಪಡೆದುಕೊಂಡಿದ್ದು, ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ನಮ್ಮತುಮಕೂರಿನ ಕ್ಷಣ…

Read More

ಒಂದು ಊರಿನಲ್ಲಿ ಒಬ್ಬ ರಾಜನು, ಮಂತ್ರಿಯನ್ನು ಕರೆದು ರಾಜ್ಯದಲ್ಲಿ ನಿಜವಾದ ದಾನಿ ಯಾರೆಂದು ಗುರುತಿಸಿ ಅವರಿಗೆ ಬಹು ಮೌಲ್ಯದ ಬಹುಮಾನ ಕೊಡಲಾಗುವುದೆಂದು ಡಂಗುರ ಸಾರಿಸಿದನು. ಅದಕ್ಕಾಗಿ ಒಂದು ದಿನ ನಿಗದಿ ಮಾಡಿ ಹಲವು ರಾಜ ಭಟರನ್ನು ರಾಜ್ಯದಲ್ಲೆಲ್ಲಾ ಗಸ್ತು ತಿರುಗುತ್ತಾ ನಿಜವಾದ ದಾನಿಯನ್ನು ಪತ್ತೆ ಮಾಡುವ ಕಾರ್ಯ ವಹಿಸಿದನು. ಇದರ ಮುಂದಾಳತ್ವ ಮತ್ತು ಜವಾಬ್ದಾರಿಯನ್ನು ಮಂತ್ರಿಗೆ ವಹಿಸಿದನು. ಹಲವು ಶ್ರೀಮಂತರು ಅತಿ ಶ್ರೀಮಂತರು ಚಿನ್ನ, ಬೆಳ್ಳಿ, ವಜ್ರ ವೈಡೂರ್ಯಗಳನ್ನು ಯಥೇಚ್ಛವಾಗಿ ದಾನ ಮಾಡಿದರೆ, ಮತ್ತೆ ಕೆಲವು ಶ್ರೀಮಂತರು ಸಾರ್ವಜನಿಕ ಭೋಜನ ವಿತರಣೆಯಂತಹ ದೊಡ್ಡ ದೊಡ್ಡ ಕಾರ್ಯಗಳನ್ನು ಮಾಡತೊಡಗಿದರು, ಮತ್ತೆ ಕೆಲವರು ಭೂದಾನಗಳನ್ನೂ ಮಾಡಿದರು. ಅಂದು ರಾಜ್ಯದಲ್ಲೆಲ್ಲಾ ದಾನ ಧರ್ಮಗಳದೇ ಕಾರುಬಾರು. ಇವೆಲ್ಲವನ್ನು ಯಾರು  ಹೆಚ್ಚು ಯಾರು ಕಡಿಮೆ ಎಂಬ ಲೆಕ್ಕಾಚಾರವನ್ನೆಲ್ಲಾ ರಾಜಭಟರು ಬರೆದುಕೊಳ್ಳುತ್ತಿದ್ದರು. ಅಂದು ಸಾಯಂಕಾಲ ಕಾರ್ಯಕ್ರಮದ ಅವಧಿ ಮುಗಿಯುತು. ಮಂತ್ರಿ, ರಾಜಭಟರು ಮತ್ತು ದಾನ ಮಾಡಿದ ಎಲ್ಲ ಶ್ರೀಮಂತರು ನಿಯೋಜಿಸಿದ್ದ ಅರಮನೆಯ ಮೈದಾನಕ್ಕೆ ಬಂದರು. ಎಲ್ಲರಿಗೂ ಒಂದೇ ಕುತೂಹಲ ಯಾರು…

Read More

ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕು ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವವು ಏಪ್ರಿಲ್ 5ರಂದು ಮಧ್ಯಾಹ್ನ 12 ಗಂಟೆಗೆ ಜರುಗಲಿದೆ. ಮಹಾರಥೋತ್ಸವ ಅಂಗವಾಗಿ ಏಪ್ರಿಲ್ 12ರವರೆಗೆ ಜಾತ್ರಾ ಕಾರ್ಯಕ್ರಮಗಳು ನಡೆಯಲಿದ್ದು, ಏಪ್ರಿಲ್ 6ರಂದು ರಾತ್ರಿ 10 ಗಂಟೆಗೆ ಬಿಲ್ವವೃಕ್ಷ ವಾಹನೋತ್ಸವ, ಏಪ್ರಿಲ್ 7ರಂದು ರಾತ್ರಿ 10 ಗಂಟೆಗೆ ಬೆಳ್ಳಿಪಲ್ಲಕ್ಕಿ ಉತ್ಸವ ಜರುಗಲಿವೆ. ಪ್ರತಿ ವರ್ಷದಂತೆ ದನಗಳ ಜಾತ್ರೆ ನಡೆಯಲಿದ್ದು, ಜಾತ್ರೆಗೆ ಬರುವ ರಾಸುಗಳಿಗೆ ನೀರು ಮತ್ತು ನೆರಳಿನ ಸೌಲಭ್ಯ ಕಲ್ಪಿಸಲಾಗುವುದು. ಜಾತ್ರೆಯಲ್ಲಿ ಆಯ್ಕೆ ಮಾಡುವ ಉತ್ತಮ ರಾಸುಗಳಿಗೆ ಏಪ್ರಿಲ್ 5ರ ಸಂಜೆ 5 ಗಂಟೆಗೆ ಬಹುಮಾನ ವಿತರಿಸಲಾಗುವುದು. ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತಾದಿಗಳು ಜಾತ್ರೆಗೆ ಆಗಮಿಸಲಿದ್ದು, ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ಸಾರಿಗೆ ಸೌಕರ್ಯ ಲಭ್ಯವಿರುತ್ತದೆ. ಜಾತ್ರಾ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More