Subscribe to Updates
Get the latest creative news from FooBar about art, design and business.
- ಸಂವಿಧಾನ ಬದ್ಧ ಮತದಾನದ ಹಕ್ಕನ್ನು ಉಳಿಸಿ: ಟಿ.ಬಿ. ಜಯಚಂದ್ರ ಕರೆ
- ಪೋಷಕತ್ವ – ಮಕ್ಕಳ ಬಾಳಿಗೆ ಬೆಳಗಾಗಿ ಕಾರ್ಯಕ್ರಮ: ಪೋಷಕರಿಂದ ಅರ್ಜಿ ಆಹ್ವಾನ
- ಎಸ್ ಐ ಆರ್: 3 ದಿನಗಳಲ್ಲಿ 5.15 ಲಕ್ಷ ಅರ್ಜಿ ವಿತರಣೆ | ಮನೆ ಭೇಟಿ ವೇಳೆ 59 ಮಂದಿ ಮೃತ ಮತದಾರರು ಪತ್ತೆ
- ಕೇಂದ್ರದ ‘ರಿವಾರ್ಡ್’ ಯೋಜನೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆರೋಪ: ಕ್ರಮಕ್ಕೆ ಭೀಮ ಆರ್ಮಿ ಒತ್ತಾಯ
- ಅಕ್ರಮ ಚಟುವಟಿಕೆ ತಡೆಗೆ ಅಂತಾರಾಜ್ಯ ಪೊಲೀಸ್ ಸಮನ್ವಯ ಸಭೆ: ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ
- ಬೆಂಗಳೂರಿನ ಜನಾಗ್ರಹ ಸಮಾವೇಶಕ್ಕೆ ಸರಗೂರು ತಾಲ್ಲೂಕಿನಿಂದ 200ಕ್ಕೂ ಹೆಚ್ಚು ದಲಿತ ಕಾರ್ಯಕರ್ತರ ಪ್ರಯಾಣ
- 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಖಚಿತ: ಮಾಜಿ ಜಿ.ಪಂ. ಸದಸ್ಯ ಜಿ. ನಾರಾಯಣ್ ಘೋಷಣೆ
- ಬಳ್ಳಾರಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ; ಕಾಲೇಜು ವಿದ್ಯಾರ್ಥಿಗಳಿಂದ ಬೃಹತ್ ಜಾಗೃತಿ ಜಾಥಾ
Author: admin
ಸರಗೂರು: ಆಲನಹಳ್ಳಿ ಹಾಡಿಯ ಕುರುಬ ಜನಾಂಗದವರಿಗೆ ಸರಿಯಾದ ಮಸಣ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಮೃತದೇಹದ ಅಂತ್ಯಸಂಸ್ಕಾರಕ್ಕೂ ಪರದಾಡಿದ ಸ ಘಟನೆ ತಾಲ್ಲೂಕಿನ ಬಿ ಮಟಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಸುಮಾರು 30 ವರ್ಷಗಳಿಂದಲೂ ಮಸಣ ಮಾಲ ಇಲ್ಲದೇ ಇಲ್ಲಿನ ಜನರು ಶವ ಸಂಸ್ಕಾರಕ್ಕೂ ಪರದಾಡುವಂತಾಗಿದೆ. ಇದಲ್ಲದೇ ಇಲ್ಲಿಗೆ ಕನಿಷ್ಠ ರಸ್ತೆ ವ್ಯವಸ್ಥೆ ಇಲ್ಲ. ಇಲ್ಲಿನ ಜನರಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಗಳು ಕೂಡ ಇಲ್ಲದಂತಹ ಸ್ಥಿತಿ ಇಲ್ಲಿದೆ ಎಂದು ಹೇಳಲಾಗಿದೆ. ಈ ಸಂಬಂಧ ಮಾಹಿತಿ ನೀಡಿದ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಬೆಟ್ಟಸ್ವಾಮಿ ಕುರ್ಣೇಗಾಲ, 30-40 ವರ್ಷಗಳಿಂದ ಇಲ್ಲಿನ ಜನರಿಗೆ ಶವ ಸಂಸ್ಕಾರ ಮಾಡಲು ಜಾಗವಿಲ್ಲ. ತಿರುಗಾಡಲು ರಸ್ತೆಯ ಇಲ್ಲ. ಇವರ ತಾತ ಕಾಲದಿಂದಲ್ಲೂ ಕಾಡಿನಲ್ಲಿ ಶವ ಸಂಸ್ಕಾರ ಮಾಡಿದ್ದರು. ಆದರೆ ಈವಾಗ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿನ ಜಾಗಕ್ಕೆ ತಂತಿಯನ್ನು ನಿರ್ಮಾಣ ಮಾಡಿಕೊಂಡು ಹಾಡಿಯ ಜನರಿಗೆ ತುಂಬಾ ತೊಂದರೆಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಕಾಡು ಕುರುಬ ಜನರಿಗೆ…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯದ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಶಿವಣ್ಣ ಕೋಟೆ ಅವರು ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಹಿರಿಯೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರಿಗೆ, ನೀಡಲಾಗುತ್ತಿರುವ ಸೌಲಭ್ಯಗಳನ್ನು ಹಾಗೂ ಪೌರಕಾರ್ಮಿಕರ ಒಟ್ಟು ವಿವರ ಹಾಗೂ ಖಾಲಿ ಇರುವ ಹುದ್ದೆಗಳ ಬಗ್ಗೆ ಇಲಾಖೆಯ ಅಧಿಕಾರಿಗಳೊಂದಿಗಳೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಹಿರಿಯೂರು ನಗರಸಭೆ ಪೌರ ಕಾರ್ಮಿಕರು ಹಾಗೂ ಅಧಿಕಾರಿಗಳಿಗೂ ಸಭೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಶಂಶುನ್ನಿಸಾ ರವರು ನಗರಸಭಾ ಸದಸ್ಯರಾದ ಜಬೀವುಲ್ಲಾರವರು ಮೊದಲ ಮೇರಿ ತಹಸಿಲ್ದಾರರಾದ ಶಿವಕುಮಾರ್ ರವರು ಆಯುಕ್ತರಾದ ಡಿ.ಉಮೇಶ್ ರವರು ಹಾಗೂ ಜಿಲ್ಲೆಯ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು. ವರದಿ: ಮುರುಳಿಧರನ್ ಆರ್., ಹಿರಿಯೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy…
ತುಮಕೂರು: ತಮ್ಮ ಒತ್ತಡದ ಕೆಲಸದ ನಡುವೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ರವರು ಮಗುವಿನೊಂದಿಗೆ ಮಗುವಾಗಿ ಕೆಲಹೊತ್ತು ಕಾಲಕಳೆದ ಘಟನೆ ತಾಲ್ಲೂಕಿನ ಹರಿವಾಣಪುರದಲ್ಲಿ ನಡೆಯಿತು. ಶುಕ್ರವಾರ ಗ್ರಾಮದ ಅಂಗನವಾಡಿ ಕಟ್ಟಡ ಉದ್ಘಾಟನೆಗಾಗಿ ಗ್ರಾಮಕ್ಜೆ ತೆರಳಿದ್ದ ಶಾಸಕರು ಕಾರ್ಯಕ್ರಮದ ನಂತರ, ಅರಳೀಕಟ್ಟೆಯ ಕೆಳಗೆ ಕುಳಿತು ಗ್ರಾಮಸ್ಥರ ಕುಂದು ಕೊರತೆ ಆಲಿಸುತ್ತಿದ್ದರು. ಈ ವೇಳೆ ವೇಳೆ ಅಲ್ಲಿಯೇ ಇದ್ದ ಮೂರು ವರ್ಷದ ಮಗುವಿನೊಂದಿಗೆ ಆನಂದವಾಗಿ ಮಾತನಾಡಿ ಮುಗ್ದ ಮಗುವಿನ ಮಾತಿಗೆ ನಕ್ಕು ನಲಿದರು. “ನಿನ್ನ ವಯಸ್ಸೆಷ್ಟು?” ಎಂದು ಕೇಳಿದಾಗ “ನನಗೆ ಇನ್ನು ವಯಸ್ಸಾಗಿಲ್ಲ” ಎಂದು ಮಗು ಹೇಳಿದಾಗ ಶಾಸಕ ಗೌರಿಶಂಕರ್ ಬಿದ್ದು ಬಿದ್ದು ನಕ್ಕರು. ಈ ವೇಳೆ ಅವರ ಜೊತೆಗಿದ್ದವರು ಕೂಡ ಜೋರಾಗಿ ನಕ್ಕರು. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುಮಕೂರು ಜಿಲ್ಲೆಯ ಹಿರಿಯ ಹೋರಾಟಗಾರಾದ ಎಂ. ರಾಮಯ್ಯನವರ “ಮನುವಾದಿಗಳ ಚೆಲ್ಲಾಟ ದಲಿತರ ಕಿತ್ತಾಟ” ಎನ್ನುವ ಬೆಂಕಿ ಬರಹದ ಶೀರ್ಷಿಕೆ ಹೊಂದಿರುವ ಪುಸ್ತಕ. ಹಿರಿಯ ಹೋರಾಟಗಾರರು ಹಳಿ ತಪ್ಪಿದ ದಲಿತ ಚಳುವಳಿಗಳನ್ನು ತಹಬಂದಿಗೆ ತಂದು ದಿಕ್ಕುತೋರುವ ಅಂಬೇಡ್ಕರ್ ವಾದಿಗಳು. ಬರಹ ಮತ್ತು ಸಾಮಾಜಿಕ ಚಿಂತನೆಯಲ್ಲಿ ಪ್ರಭುದ್ಧತೆ ಬೆಳೆಸಿಕೊಂಡ ಹಿರಿಯರು ನಮ್ಮದೆ ತುಮಕೂರು ಜಿಲ್ಲೆಯ ಎಲೆಮರೆಯಕಾಯಿ. ಸಾಮಾನ್ಯವಾಗಿ ಬರೆಯುವ ಗೋಜಿಗೆ ಹೋದವರು ಭ್ರಮೆಯನ್ನೋ ಅದ್ಭುತವನ್ನೂ ಅಥವಾ ಯಾವುದೋ ಬಲಿತ ವ್ಯಕ್ತಿಯನ್ನೋ ಗುರಿಯಾಗಿಸಿ ಗೀಚುತ್ತ ವಿಸ್ತರಿಸಿ ಬರೆಯುತ್ತಾ ಹೋಗುವವರ ಸಾಲಿನಲ್ಲಿ ಎಂ ರಾಮಯ್ಯನವರು ವಿಶೇಷವಾಗಿ ಯಾರು ಮುಟ್ಟದ ವಿಷಯವಿಡಿದು ಶ್ರೇಷ್ಠ ವ್ಯಕ್ತಿಯಾಗಿ ಈ ಪುಸ್ತಕದಲ್ಲಿ ಎದುರುಗೊಳ್ಳುತ್ತಾರೆ. ಅದು ಶೋಷಿತರ ಪರ ದುಡಿತ ಮಿಡಿತ ನಿತ್ಯ ಹರಿದ್ವರ್ಣದ ಚಿಂತನೆ. ಅವರು ತಮ್ಮ ಬಗ್ಗೆ ಹೀಗೆ ಹೇಳುತ್ತಾರೆ. “ನನ್ನ ಜೀವನದ ಬದುಕಿನಲ್ಲಿ ಅಲ್ಲಲ್ಲಿ ಬರೆದ ನನ್ನ ಹೆಸರನ್ನು ಪಾಪಿ ಇಲಿಗಳು ಚೂರು ಚೂರು ಮಾಡಿ ಬಿಟ್ಟಿವೆ” ಎನ್ನುವ ವಿಷಾದ ನುಡಿಯ ಹಿಂದೆ ಒಂದು ಆಕ್ರಂದನವಿದೆ.ಅಲ್ಲಿಂದ ಶುರುವಾಗಿ ಅದು ತನ್ನದೆ…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಳಿಯಾರ್ ರಸ್ತೆಯಲ್ಲಿನ ಪೌದಿಯಮ್ಮ(ಭಗವತಿ) ಅಮ್ಮನ ದೇವಸ್ಥಾನಕ್ಕೆ ತಿರುಗುವ ತಿರುವಿನಲ್ಲಿರುವ ಸೇತುವೆ ಭೂಮಿಯಿಂದ ಬೇರ್ಪಟ್ಟಿದ್ದು , ಇನ್ನೇನು ಆಗಲೋ , ಈಗಲೋ ಕಳಚಿ ಬೀಳುವಂತಿದೆ. ಈ ರಸ್ತೆಯು ಮೈಸೂರಿಗೆ ತೆರಳುವ ಪ್ರಧಾನ ರಸ್ತೆಯಾಗಿದ್ದು , ಈ ರಸ್ತೆಯಲ್ಲಿನ ಬದಿಯಲ್ಲಿರುವ ಸೇತುವೆ ಶಿಥಿಲಾವಸ್ಥೆ ಗೆ ತಲುಪಿ ವರ್ಷಗಳೇ ಕಳೆದವು . ಈ ರಸ್ತೆಯಲ್ಲಿನ ಬೀದಿ ದೀಪಗಳು ಕೂಡ ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ರಸ್ತೆಯು ಬಹಳ ಕಿರಿದಾಗಿದ್ದು, ಇಲ್ಲಿ ಬಹಳಷ್ಟು ಅಪಘಾತಗಳು ಕೂಡ ನಡೆಯುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸೇತುವೆಯನ್ನು ಸರಿಪಡಿಸಿ ಎಂದು ತಾಲ್ಲೂಕಿನ ಸಾರ್ವಜನಿಕರು ಹಲವು ಭಾರಿ ದೂರು ನೀಡಿದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ. ಇದರಿಂದ ನೊಂದ ಸಾರ್ವಜನಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಸೇತುವೆಯು ಇನ್ನೇನೂ ಇವಾಗಲೋ ಅವಾಗಲೋ ಕಳಚಿ ಬೀಳುವ ಸ್ಥಿತಿಯಲ್ಲಿರುವುದರಿಂದ ತಾಲ್ಲೂಕಿನ ಶಾಸಕರು ಈ ತಕ್ಷಣವೇ ಈ ಬಗ್ಗೆ ಗಮನ ಹರಿಸಿ ಸಂಬಂಧಪಟ್ಟವರನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಬೇಕು ಎಂದು…
ತಿಪಟೂರು: ತಾಲ್ಲೂಕಿನ ಬಳ್ಳೆಕಟ್ಟೆ ಗ್ರಾಮದ ರೈತ ಕವಿ ಪಿ.ಶಂಕ್ರಪ್ಪ ಅವರಿಗೆ ವಿದ್ಯಾ ವಿಭೂಷಣ ಹಾಗೂ ರಾಜ್ಯ ಮಟ್ಟದ ರೈತ ಕೃಷಿ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಇವರನ್ನು ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘದ ತಾಲೂಕು ಮಧುಗಿರಿ ವತಿಯಿಂದ ವಿಶೇಷ ಅತಿಥಿಯಾಗಿ ಆಹ್ವಾನಿಸಿ ಗೌರವಿಸಿ ಸನ್ಮಾನಿಸಲಾಯಿತು ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ರೈತ ಕವಿ ಪಿ.ಶಂಕ್ರಪ್ಪ ಬಳ್ಳೆಕಟ್ಟೆ ಅವರು, ಗ್ರಾಮ ಪಂಚಾಯಿತಿ ಗ್ರಂಥಾಲಯಗಳು, ಗ್ರಾಮೀಣ ಭಾಗದ ಜನಸಾಮಾನ್ಯರದೇವರ ದೇವಾಲಯಗಳು ಬಡಮಕ್ಕಳ ಸೌಭಾಗ್ಯ ಜ್ಞಾನ ನಿಧಿಗಳಾಗಿಕಾರ್ಯನಿರ್ವಹಿಸುತ್ತಿವೆ. ಸರ್ಕಾರ ಗ್ರಾಮೀಣ ಭಾಗದ ಗ್ರಂಥಾಲಯಗಳನ್ನು ಡಿಜಿಟಲೀಕರಣ ಗೋಳಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು ಹಾಗೂ ಸಂಘ-ಸಂಸ್ಥೆಗಳು ಜೇನುಗೂಡಿನಂತೆ ಒಗ್ಗೂಡಿ ಕೆಲಸ ಮಾಡಿದರೆ ಫಲಜಗಕರ್ಪಿತವಾಗುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ರಾಜ್ಯ ಪದಾಧಿಕಾರಿಗಳಾದ ಬಾಲ್ಯ ಗಂಗಾಧರ್, ಸಿರಿವಾರ ಶಿವಮೂರ್ತಿ, ಜಿಲ್ಲಾ ಉಪಾಧ್ಯಕ್ಷರಾದ ಸಾವಿತ್ರಮ್ಮ, ನಿಕಟಪೂರ್ವಅಧ್ಯಕ್ಷರಾದ ನಟರಾಜ್, ನೂತನ ತಾಲೂಕು ಅಧ್ಯಕ್ಷರಾದ ಹನುಮಂತರಾಜು, ಉಪಾಧ್ಯಕ್ಷರಾದ ಅನಿತಾ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ, ಶಿವಣ್ಣ, ಕಮಲ, ರಂಗಮ್ಮ ಮಮತಾ ಸೇರಿದಂತೆ…
ಹೆಚ್ ಡಿ ಕೋಟೆ/ ಸರಗೂರು: ಕೊವಿಡ್ ಹಿನ್ನೆಲೆಯಲ್ಲಿ ಗಡಿ ಪ್ರದೇಶವಾದ ಬಾವಲಿ ಚೆಕ್ ಪೋಸ್ಟ್ ಗೆ ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಭೇಟಿ ನೀಡಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು. ಡಿ.ಪಿ. ಕುಪ್ಪೇಗೆ ವ್ಯಾಪ್ತಿಗೆ ಬರುವ ಬಾವಲಿ ಚೆಕ್ ಪೋಸ್ಟ್ ಬಳಿ ಕೇರಳದಿಂದ ಹೆಚ್.ಡಿ. ಕೋಟೆ ತಾಲ್ಲೂಕಿನ ಬಾವಲಿ ಚೆಕ್ ಪೋಸ್ಟ್ ಮೂಲಕ ಕರ್ನಾಟಕ್ಕೆ ಆಗಮಿಸುವವರ ಮೇಲೆ ಕಣ್ಣಿಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯಾಧಿಕಾರಿ ಕೊವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಮೇರೆಗೆ ಕೇರಳದಿಂದ ಬರುವ ಜನರನ್ನು ಪರಿಶೀಲನೆ ನಡೆಸಿ, ನೆಗೆಟಿವ್ ರಿಪೋರ್ಟ್ ನೋಡಿ ಪ್ರವೇಶ ನೀಡಬೇಕು ಎಂದು ಸೂಚನೆ ನೀಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊವಿಡ್ ವೈರಸ್ ಮತ್ತು ಒಮಿಕ್ರಾನ್ ಬಗ್ಗೆ ಎಚ್ಚರಿಕೆ ವಹಿಸುತ್ತಿದ್ದೇವೆ. 72 ಗಂಟೆಗಳಲ್ಲಿ ಕೊವಿಡ್ ಟೆಸ್ಟ್ ಆಗಿ ನೆಗೆಟಿವ್ ರಿಪೋರ್ಟ್ ಇರುವವರನ್ನು Q R ಬಾರ್ ಕೋಡಿಂಗ್ ನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಬೆಳ್ಳಗೆ 6 ಗಂಟೆಯಿಂದ ಸಂಜೆ 6 ತನಕ ಎಲ್ಲಾ ವಾಹನಗಳನ್ನು…
ಬೆಂಗಳೂರು: ಖಾಸಗಿ ಕಂಪನಿಯ ಎಲೆಕ್ಟ್ರಿಕ್ ಬೈಕ್ ನ್ನು ಸಚಿವ ಶ್ರೀರಾಮುಲು ಅವರು ಉದ್ಘಾಟಿಸಿ, ಪರಿಸರ ಸ್ನೇಹಿ ಬೈಕ್ ಗಳ ಸಂಖ್ಯೆ ಹೆಚ್ಚಿಸಲು ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಅವರು, ಮೇಡ್ ಇನ್ ಕರ್ನಾಟಕ, ಮೇಡ್ ಇನ್ ಇಂಡಿಯಾ ಅಡಿಯಲ್ಲಿ ನಮ್ಮದೇ ಸ್ಟಾರ್ಟ್ ಆಪ್ ಗಳು ದೇಶದಾದ್ಯಂತ ಅರಿವು ಮೂಡಿಸಲು ದಾಖಲೆ ಯಾತ್ರೆ ಕೈಗೊಳ್ಳುತ್ತಿರುವುದು ಒಳ್ಳೆಯ ವಿಷಯ ಎಂದರು. ಎಲೆಕ್ಟ್ರಿಕ್ ಬೈಕ್ ಗಳಲ್ಲಿ 54 ದಿನಗಳಲ್ಲಿ 4,216 ಕಿ.ಮೀ ಪ್ರಯಾಣ ಮಾಡಿ ಅರಿವು ಮೂಡಿಸುವ ಜೊತೆಗೆ ದಾಖಲೆ ಪ್ರಯಾಣ ಕೈಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಖಾಸಗಿ ಸಂಸ್ಥೆಗಳು ಹಾಗೂ ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪೆಟ್ರೋಲ್, ಡಿಸೇಲ್ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಲು ಎಲೆಕ್ಟ್ರಿಕ್ ಗೆ ಬದಲಾಗಬೇಕಿದೆ ಎಂದು ಅವರು ತಿಳಿಸಿದರು. ಇತ್ತೀಚೆಗೆ ಸುಮಾರು 50 ಕೋಟಿ ವೆಚ್ಚದಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ಸೇವೆಗೆ ಅರ್ಪಿಸಲಾಗಿದೆ ಹಾಗೆಯೇ ಹಲವು ಸಂಸ್ಥೆಗಳು ತಮ್ಮ ಎಲೆಕ್ಟ್ರಿಕ್ ಟು ವೀಲರ್ , ಫೋರ್ ವೀಲರ್ ಹಾಗೂ ಆಟೋಗಳನ್ನು…
ತುರುವೇಕೆರೆ ತಾಲ್ಲೂಕು ದಂಡಿನಶಿವರ ಹೋಬಳಿ ,ಕೊಂಡಜ್ಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಿಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ.ಜಿ.ಪುರುಷೋತ್ತಮ್ ವಹಿಸಿದ್ದರು. ತರಬೇತಿ ಕಾರ್ಯಾಗಾರಕ್ಕೆ ಆಗಮಿಸಿದ ಎಲ್ಲ ಸದಸ್ಯರನ್ನು ಶಿಕ್ಷಕರಾದ ಮೋಹನ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ವನಜಾಕ್ಷಮ್ಮ ಮಾತನಾಡಿದರು. ಶಿಕ್ಷಕಿ ಲಕ್ಷ್ಮೀ ವಂದಿಸಿದರು. ಈ ಕಾರ್ಯಾಗಾರದಲ್ಲಿ ಸದಸ್ಯರು ಶಿಕ್ಷಕರು ಹಾಜರಿದ್ದರು. ವರದಿ: ಸುರೇಶ್ ಬಾಬು. ಎಂ.ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಿತ್ರದುರ್ಗ: ಜಿಲ್ಲೆಯ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಮಡಿವಾಳ ಜನಾಂಗದವರು (ಗುರುಪೀಠದಲ್ಲಿ )ದಲ್ಲಿ ಆಯೋಜಿಸಿದ್ದ ‘ಕಾಯಕ ಜನೋತ್ಸವ-2022’ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಡಿವಾಳ ಜನಾಂಗದ ಪರಮಪೂಜ್ಯ ಗುರುಗಳಾದ , ಡಾ.ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ಸಾನಿದ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಮಾಚಿದೇವ ಮಹಾಸಂಸ್ಥಾನದಲ್ಲಿ ಮಾಚಿದೇವ ರತ್ನ ಪುರಸ್ಕೃತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಂತಹ ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕರು ಹಾಗೂ ಸಚಿವರು ಡಿ.ಸುಧಾಕರ್ ರವರನ್ನು ಸಹ ಸಿದ್ದರಾಮಯ್ಯ “ನವರ ನೇತೃತ್ವದಲ್ಲಿ ಪರಮಪೂಜ್ಯ ಮಡಿವಾಳ ಗುರುಗಳಾದ ಡಾ.ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ಡಿ ಆತ್ಮಿಯವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರು ಮಾಜಿ ಸಂಸದರು ಆದ ಬಿ.ಎನ್ ಚಂದ್ರಪ್ಪ, ಡಿ .ಸುಧಾಕರ್ , ಟಿ.ರಘುಮೂರ್ತಿ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು , ಸಚಿವರು , ಕಾರ್ಯಕರ್ತರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು. ವರದಿ: ಮುರುಳಿಧರನ್ ಆರ್ . ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ…