Author: admin

ತುಮಕೂರು:  ಸಹಕಾರ ಸಂಘ/ಸಹಕಾರ ಬ್ಯಾಂಕುಗಳ ಸದಸ್ಯರ ಆರೋಗ್ಯ ರಕ್ಷಣಾ ಹಿತದೃಷ್ಟಿಯಿಂದ ಸರ್ಕಾರದಿಂದ ಅನುಷ್ಟಾನಗೊಳಿಸಿರುವ ಯಶಸ್ವಿನಿ ಆರೋಗ್ಯ ಯೋಜನೆಯಡಿ ನೋಂದಾಯಿಸಿಕೊಳ್ಳಲು ಮಾರ್ಚ್ 31 ಕಡೆಯ ದಿನವಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಹಕಾರ ಸಂಘಗಳು/ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿರುವ ಅರ್ಹ ಸದಸ್ಯರು ಸಂಬಂಧಿಸಿದ ಸಹಕಾರ ಸಂಘ/ಬ್ಯಾಂಕುಗಳ ಮುಖ್ಯ ಕಾರ್ಯನಿರ್ವಾಹಕರನ್ನು ಸಂಪರ್ಕಿಸಿ ಯಶಸ್ವಿನಿ ಯೋಜನೆಯ ವಂತಿಕೆ ಮೊತ್ತವನ್ನು ಪಾವತಿಸಿ ನೋಂದಾಯಿಸಿಕೊಳ್ಳಬಹುದಾಗಿದೆ. ಪ.ಜಾತಿ ಹಾಗೂ ಪ.ಪಂಗಡಗಳಿಗೆ ಸೇರಿದ ಸದಸ್ಯರುಗಳಿಗೆ ವಂತಿಕೆ ಮೊತ್ತವನ್ನು ಪಾವತಿಸುವ ಅವಶ್ಯಕತೆಯಿರುವುದಿಲ್ಲ. ಅರ್ಹ ಸದಸ್ಯರು ಮಾರ್ಚ್ 31ರೊಳಗಾಗಿ ಯಶಸ್ವಿ ಯೋಜನೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಯೋಜನೆಯ ಪ್ರಯೋಜನ ಪಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ತುಮಕೂರು:  ಚಿನ್ನಾಭರಣ ದೋಚುವ ಸಲುವಾಗಿ ಮಹಿಳೆಯನ್ನು ಕೊಲೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪುನೀಡಿದೆ. ಅಪರಾಧಿಗಳೆಂದು ಶಿವಕುಮಾರ, ಮಂಜುನಾಥ  ಅವರುಗಳನ್ನು ನ್ಯಾಯಾಧೀಶ ಯಾದವ ಕರಕೇರ ತೀರ್ಪು ನೀಡಿದ್ದಾರೆ. ಬಡವನಹಳ್ಳಿ ಪೊಲೀಸ್ ಠಾಣೆ ವ್ಯಾಫ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಫಿಗಳಿಬ್ಬರು 06—06–19 ರಂದು ಕೊಲೆಯಾಗಿರುವ ಗಿರಿಜಮ್ಮ ರವರನ್ನು ಮಧ್ಯಾಹ್ನ 12:30 ಗಂಟೆಯಲ್ಲಿ ತುಂಬಾಡಿಯಿಂದ ಕೆ.ಎ-06-ಡಿ-3279 ಟಾಟಾ ಇಂಡಿಕಾ ವಿಸ್ತಾ ಕಾರಿನಲ್ಲಿ ಗರಣಿ ಹೊಸಕೋಟೆಗೆ ಮಟನ್ ಊಟಕ್ಕೆ ಹೋಗಿಬರೋಣ ಎಂತಾ ಹೇಳಿ ಕರೆದುಕೊಂಡು  ಹೋಗಿದ್ದರು. ಅದೇ ದಿವಸ ಸಂಜೆ 06:30 ಗಂಟೆಗೆ ಮಾಯಗೊಂಡನಹಳ್ಳಿ ಕ್ರಾಸ್ ಹತ್ತಿರದ ರಸ್ತೆ ಬದಿಯ ಕೆಂಪಚೆನ್ನೇನಹಳ್ಳಿ ಬಳಿ ಪಾಳು ಜಮೀನಿಗೆ ಕರೆದುಕೊಂಡು ಹೋಗಿದ್ದರು. ಹೊಂಗೆಗಿಡದ ಮರೆಯಲ್ಲಿ ಕಾರುನಿಲ್ಲಿಸಿ ಕಾರಿನಲ್ಲಿಯೇ ಆರೋಪಿಗಳು  ಹಗ್ಗವನ್ನು ಗಿರಿಜಮ್ಮಳ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದರು. ಗಿರಿಜಮ್ಮಳ ಎದೆಗೆ ಕಾಲಿನಿಂದ ಒದ್ದು ಕೈಯಿಂದ ಗುದ್ದಿ ಇಬ್ಬರೂ ಸೇರಿ ಕೊಲೆ ಮಾಡಿದ್ದರು. ನಂತರ ಆಕೆಯ ಬಳಿಯಿದ್ದ ಸುಮಾರು…

Read More

ಬೆಂಗಳೂರು: ಹನಿಟ್ರ್ಯಾಪ್ ಯತ್ನ ಪ್ರಕರಣ ರಾಜ್ಯದಲ್ಲಿ ರಾಜಕೀಯ ತಿರುವು ಪಡೆದುಕೊಂಡಿದ್ದು, ಪ್ರಭಾವಿ ನಾಯಕನ ಪಾತ್ರದ ಬಗ್ಗೆ ಸಚಿವರು ಮತ್ತು ಶಾಸಕರ ಗುಂಪು ಹೈಕಮಾಂಡ್ ನ್ನು ಭೇಟಿ ಮಾಡಲು ಯೋಜನೆ ರೂಪಿಸಿದೆ ಎನ್ನಲಾಗಿದೆ. ದೂರು ನೀಡುತ್ತೇನೆ ಎನ್ನುತ್ತಿರುವ ಕೆ.ಎನ್.ರಾಜಣ್ಣ, ದೂರು ನೀಡದೇ ವಿಳಂಬ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿ, ಕೋರ್ಟ್ ನಲ್ಲಿ ಬಗೆಹರಿಯಬೇಕಾಗಿದ್ದ ವಿಚಾರ ಸದನದಲ್ಲಿ ಪ್ರಸ್ತಾಪವಾಗಿದ್ದು, ಕೇವಲ ವಿವಾದವಾಗಿಯೇ ಮುಂದುವರಿದಿದೆ. ದೂರು ದಾಖಲಿಸಲು ಕೆ.ಎನ್.ರಾಜಣ್ಣ ವಿಳಂಬ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದೂರು ದಾಖಲಿಸಲಿ ರಾಜಣ್ಣ ವಿಳಂಬ ಮಾಡುತ್ತಿರುವುದೇಕೆ? ಹನಿಟ್ರ್ಯಾಪ್ ಮಾಡಿದ ಆರೋಪಿಗಳು ಇಂತಹವರೇ ಎನ್ನುವುದು ತಿಳಿದಿದ್ದರೂ, ರಾಜಣ್ಣ ಆರೋಪ ಮಾಡಿ ಕಾಲಹರಣ ಮಾಡುತ್ತಿರುವುದೇಕೆ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಕೊರಟಗೆರೆ: ಹುಟ್ಟುಹಬ್ಬಗಳನ್ನು ಸಾರ್ವಜನಿಕ ಸೇವೆಯನ್ನಾಗಿ ಆಚರಿಸಿದರೆ ಅರ್ಥ ಪೂರ್ಣವಾಗಿರುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಹಾಲಿಂಗಪ್ಪ ತಿಳಿಸಿದರು. ಅವರು ತಮ್ಮ 56 ನೇ ಹುಟ್ಟು ಹಬ್ಬದ ಪ್ರಯುಕ್ತ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು, ಬ್ರೆಡ್, ಹಾಗೂ ಕೋಳಾಲ ಹೋಬಳಿಯ ಹೊಸಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಪಠ್ಯದ ಸಲಕರಣೆಗಳನ್ನು ವಿತರಿಸಿ ಮಾತನಾಡಿ, ನನ್ನ ಹುಟ್ಟು ಹಬ್ಬವನ್ನು ನಮ್ಮ ಸ್ನೇಹಿತರ ಜೊತೆ ಗೂಡಿ ಸಾರ್ವಜನಿಕ ಸೇವೆಯನ್ನಾಗಿ ಮಾಡಿಕೊಂಡಿರುವುದು ಸಂತೋಷ ತಂದಿದೆ, ನಮ್ಮ ಕೊರಟಗೆರೆ ಪಟ್ಟಣದ ಬಸ್ಟಾಂಡ್ ಗೆಳೆಯರ ಬಳಗದ ಬೇಡಿಕೆಯಂತೆ ಸಾರ್ವಜನಿಕರಿಗೆ ಕುಡಿಯುವ ನೀರಿನ ಘಟಕವನ್ನು ನಮ್ಮ ನಾಯಕರಾದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರಿಂದ ಹಾಕಿಸಿ ಕೊಡಲಾಗುವುದು ಮುಂದಿನ ದಿನಗಳಲ್ಲೂ ಸಹ ಸಾರ್ವಜನಿಕ ಸೇವೆಗೆ ಬದ್ದನಾಗಿರುತ್ತೇನೆ ಎಂದರು. ಮಾಜಿ ಜಿಲ್ಲಾ ಪಂಚಾಯಿತಿ ಅದ್ಯಕ್ಷೆ ಪ್ರೇಮ ಮಹಾಲಿಂಗಪ್ಪ ಮಾತನಾಡಿ, ಹಲವು ವರ್ಷಗಳಿಂದ ನಮ್ಮ ಕುಟುಂಬದವರು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದೇವೆ. ಸರ್ಕಾರಿ…

Read More

ಕೊರಟಗೆರೆ: ಸರ್ಕಾರ ಒಳ ಮೀಸಲಾತಿ ಜಾರಿ ಮಾಡಿದ್ದಲ್ಲಿ ಸಾಕಷ್ಟು ನಮ್ಮ ಸಮುದಾಯದ ಮುಂದಿನ ಪೀಳಿಗೆಗೆ ಬಹಳ ತೊಂದರೆಯಾಗುತ್ತದೆ ಎಂದು ತಾಲೂಕು ಬಂಜಾರ ಲಂಬಾಣಿ ಸಂಘದ ಖಜಾಂಚಿ ವಿಜಯಶಂಕರ್ ಹೇಳಿದರು. ಅವರು ತಾಲೂಕಿನ ಪಕೀರಪ್ಪನ ಪಾಳ್ಯ ಮೇಗಳ ತಾಂಡದಲ್ಲಿ ಏರ್ಪಡಿಸಿದ್ದ ಬಂಜಾರ ಸಂಘದ ವಾರ್ಷಿಕ ಮಹಾಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾಕಷ್ಟು ಕಷ್ಟಪಟ್ಟು ನಮ್ಮ ಸಮುದಾಯದವರು ಬೆಟ್ಟ ಗುಡ್ಡಗಳಲ್ಲಿ ವಾಸ ಮಾಡಿ ಬಂದವರು, ನಮ್ಮ ಸಮುದಾಯದ ಎಲ್ಲಾ ಯುವಕ ಯುವತಿಯರು ಮುಖ್ಯ ವಾಹಿನಿಗೆ ಬರಬೇಕಾದರೆ ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡಿದರೆ ನಮ್ಮ ಸಮುದಾಯದವರು ದೊಡ್ಡಮಟ್ಟದ ಸಮಸ್ಯೆಗಳನ್ನು ಎದುರಿಸಬೇಕಾಗಿರುತ್ತದೆ. ನಮ್ಮ ತಾಲೂಕಿನಲ್ಲಿ ಮಂಜೂರಾಗಿ ಅಪೂರ್ಣಗೊಂಡಿರುವ ಸಮುದಾಯ ಭವನವನ್ನು ಸಂಬಂಧಪಟ್ಟ ಅಧಿಕಾರಿಗಳು ಪೂರ್ಣಗೊಳಿಸಬೇಕು ಇಲ್ಲವಾದರೆ ಹೋರಾಟದ ಅನಿವಾರ್ಯತೆ ಇದೆ ಎಂದು ಹೇಳಿದರು. ತಾಲೂಕು ಬಂಜಾರ ಲಂಬಾಣಿ ಸಂಘದ ಉಪಾಧ್ಯಕ್ಷ ಹರೀಶ್ ಬಾಬು ಪಿ.ಎಸ್. ಮಾತನಾಡಿ, ನಮ್ಮ ಸಮುದಾಯದವರು ಒಗ್ಗಟ್ಟಾಗಿ ಕೆಲಸ ಮಾಡದೇ ಇದ್ದರೆ ನಮ್ಮ ಮುಂದಿನ ಪೀಳಿಗೆ…

Read More

ಮಧುಗಿರಿ: ಸಾರ್ವಜನಿಕರ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ ಹಾಗೂ ಅಧಿಕಾರದ ದರ್ಪ ಎದ್ದು ಕಾಣುತ್ತಿದ್ದು, ಜನಸೇವೆಯ ಮನೋಭಾವ ಕಾಣುತ್ತಿಲ್ಲ ಹಾಗೂ ಇಂದು ಕರೆದಿರುವ ಸಭೆಗೆ ಸಾರ್ವಜನಿಕರು ಬಾರದಿರುವ ಬಗ್ಗೆ ಪ್ರಚಾರದ ಕೊರತೆಯ ಬಗ್ಗೆಗೂ ಲೋಕಾಯುಕ್ತ ಅಧೀಕ್ಷಕ ಲಕ್ಷ್ಮೀನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ನಡೆದ ಲೋಕಾಯುಕ್ತ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಭೆಗೆ ಕನಿಷ್ಟ 10 ದೂರುಗಳು ಬಂದಿಲ್ಲ. ಯಾಕೆ ಸಾರ್ವ ಜನಿಕರಿಗೆ ಮಾಹಿತಿ ನೀಡಿಲ್ಲವೇ ಎಂದು ತಾ.ಪಂ.ಇಓ ರವರನ್ನು ಪ್ರಶ್ನಿಸಿದರು. ಎಲ್ಲ ಇಲಾಖೆಯ ಕಚೇರಿಯಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲು ಸಮಗ್ರ ಮಾಹಿತಿ ಒಳಗೊಂಡ ನಾಮಫಲಕ ಹಾಕಬೇಕಿದ್ದು, ಶೇ.90 ರಷ್ಟು ಇಲಾಖೆಗಳು ಹಾಕಿಲ್ಲ ಸಾರ್ವಜನಿಕರಿಂದ ಬಂದಂತಹ ಅರ್ಜಿಗಳನ್ನು ಅಂದೇ ವಿಲೇವಾರಿ ಮಾಡಿದರೆ ಅರ್ಧ ಕೆಲಸ ಮುಗಿಯುತ್ತದೆ. ಆದರೆ ನೀವು ಬೇಕಂತಲೇ ತಡ ಮಾಡುವುದಲ್ಲದೆ ಅರ್ಜಿಯನ್ನು ವಜಾ ಮಾಡಲು ಕಾರಣ ಹುಡುಕುತ್ತೀರಾ ಬದಲಾಗಿ ಅರ್ಜಿಗೆ ನ್ಯಾಯ ಕೊಡಲು ಮಾರ್ಗ ಹುಡುಕಲ್ಲ. ಈ ಮನೋಭಾವದಿಂದ ನಿಮಗೆ ಇರುವ ಗೌರವ ಹಾಳಾಗಲಿದ್ದು, ಕರ್ತವ್ಯಕ್ಕೆ…

Read More

ತುಮಕೂರು: ನಿನ್ನೆ ಮತ್ತು ಇಂದು AIDSO ವಿದ್ಯಾರ್ಥಿ ಸಂಘಟನೆಯ ವತಿಯಿಂದ “ಶಹೀದ್ ಏ ಅಜಮ್ ಭಗತ್ ಸಿಂಗ್” ರವರ 94ನೇ ಹುತಾತ್ಮ ದಿನದ ಅಂಗವಾಗಿ ನಗರದೆಲ್ಲೆಡೆ ಕಾರ್ಯಕ್ರಮಗಳು ಮಾಡಲಾಯಿತು. ಭಗತ್ ಸಿಂಗ್, ಸುಖದೇವ್, ರಾಜ್ ಗುರು ನಗುನಗುತ್ತಾ ಗಲ್ಗಂಬಕ್ಕೆ ಏರಿ ಇಂದಿಗೆ 94 ವರ್ಷಗಳು. ಇಂದಿಗೂ ಈ ಮಹಾನ್ ವ್ಯಕ್ತಿಗಳೇ ನಮಗೆ ಆದರ್ಶ. ಭಗತ್ ಸಿಂಗ್ ಹೆಸರೇ ಇಂದಿಗೂ ಎಲ್ಲರಲ್ಲೂ ಹೊಸ ಚೈತನ್ಯ ತುಂಬುತ್ತದೆ. ಆದರೆ, ಭಗತ್ ಸಿಂಗ್ ಕನಸು ಕಂಡ ಯಾವ ಮಗುವು ಹಸಿವಿನಿಂದ ನರಳದ, ಎಲ್ಲರಿಗೂ ಸಮಾನ ಶಿಕ್ಷಣ ಸಿಗುವ, ಉಚಿತ ಆರೋಗ್ಯ ಸಿಗವ ಸಮಾಜವಾದಿ ಭಾರತ ಇಂದಿಗೂ ಕನಸಾಗಿಯೇ ಉಳಿದಿದೆ. ಈ ಕನಸನ್ನು ನನಸಾಗಿಸುವ ಜವಾಬ್ದಾರಿಯನ್ನು ತೆಗೆದುಕೊಂಡು, ಅವರ ವಿಚಾರಗಳನ್ನು ಸಾರುತ್ತ AIDSO ವಿದ್ಯಾರ್ಥಿ ಸಂಘಟನೆ ವತಿಯಿಂದ ಭಗತ್ ಸಿಂಗ್, ಸುಖದೇವ್, ರಾಜಗುರು ರವರ 94ನೇ ಹುತಾತ್ಮ ದಿನದ ಕಾರ್ಯಕ್ರಮಗಳನ್ನು ನಗರದೆಲ್ಲೆಡೆ ಹಮ್ಮಿಕೊಳ್ಳಲಾಯಿತು. ಹಾಗೆಯೇ, ಇಂದಿನ ರಾಜ್ಯ ಸರ್ಕಾರ, ಹಿಂದಿನ ಸರ್ಕಾರದಂತೆ ಸಂಯೋಜನೆ ಹೆಸರಿನಲ್ಲಿ ಸಾವಿರಾರು ಸರ್ಕಾರಿ…

Read More

ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 10+2 (ಪದವಿ ಪೂರ್ವ) ಮತ್ತು 10+2+3 (ಸ್ನಾತಕ ಪದವಿ) ವಿದ್ಯಾರ್ಹತೆ ಹೊಂದಿರುವ ಎಲ್ಲಾ ವಯೋಮಾನದ ವಿದ್ಯಾರ್ಥಿಗಳು ಮನೆಯಲ್ಲೇ ಅಥವಾ ಯಾವುದೇ ಕೆಲಸ ನಿರ್ವಹಿಸಿಕೊಂಡು ಕಾಲೇಜುಗಳಿಗೆ ಹೋಗದೆ ಕರಾಮುವಿಯ ಮೂಲಕ ಯೋಚಿಸಿ ಅನುಮೋದಿತ ಸ್ನಾತಕ/ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯಬಹುದಾಗಿದೆ. ಕರಾಮುವಿಯು ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ 2024-25ನೇ (ಜನವರಿ ಆವೃತ್ತಿ) ಶೈಕ್ಷಣಿಕ ಸಾಲಿನ ಪ್ರವೇಶಾತಿ ಅಂತಿಮ ಹಂತದಲ್ಲಿದ್ದು, ಯುಜಿಸಿ ಅನುಮೋದಿತ ಸ್ನಾತಕ/ಸ್ನಾತಕೋತ್ತರ ಕೋರ್ಸ್ ಗಳಾದ ಬಿ.ಎ/ಬಿ.ಕಾಂ/ಬಿ.ಬಿ.ಎ/ಬಿ.ಸಿ.ಎ/ಬಿ.ಎಲ್.ಐ.ಎಸ್ಸಿ ಹಾಗೂ ಬಿ.ಎಸ್ಸಿ., ಎಂ.ಎ/ಎಂ.ಸಿ.ಜೆ., ಎಂ.ಕಾಂ(Dual Specialization)., ಎಂ.ಎಲ್.ಐ.ಎಸ್ಸಿ., ಎಂ.ಎಸ್ಸಿ., ಎಂ.ಬಿ.ಎ(AICTE Approved)., ಪಿ.ಜಿ. ಸರ್ಟಿಫಿಕೇಟ್., ಡಿಪ್ಲೋಮಾ., ಸರ್ಟಿಫಿಕೇಟ್ ಪ್ರೋಗ್ರಾಮ್ ಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ. ಪ್ರಥಮ ವರ್ಷದ ಪ್ರವೇಶಾತಿಗೆ 2025ರ ಮಾರ್ಚ್ 31 ಕೊನೆಯ ದಿನಾಂಕವಾಗಿದೆ. “ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾತ್ರ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕ ಮಾತ್ರ ವಿಶ್ವವಿದ್ಯಾನಿಲಯವಾಗಿರುತ್ತದೆ”. ಯುಜಿಸಿ ನಿಯಮಾವಳಿ ಪ್ರಕಾರ ಮುಕ್ತ ವಿಶ್ವವಿದ್ಯಾನಿಲಯ ನೀಡುವ ಪದವಿಗಳು ರೆಗ್ಯುಲರ್ ಮೂಲಕ ನೀಡುವ ಪದವಿಗಳು…

Read More

ತುಮಕೂರು: ಗುಬ್ಬಿ ತಾಲ್ಲೂಕಿನ ಕಳೆದ ರಾತ್ರಿ ಬಿರುಗಾಳಿ ಸಮೇತ ಮಳೆಯಾಗಿದ್ದು, ಪರಿಣಾಮವಾಗಿ ಅಡಿಕೆ, ತೆಂಗಿನ ಮರಗಳು ಧರೆಗುರುಳಿವೆ. ಗುಬ್ಬಿ ತಾಲ್ಲೂಕಿನ ಚಂದ್ರಶೇಖರಪುರದ ಬಳಿ ಘಟನೆ ನಡೆದಿದೆ. ಬಿರುಗಾಳಿ ಮಳೆಯ ಪರಿಣಾಮ ವಿದ್ಯುತ್ ಕಂಬಗಳು ಬಿದ್ದಿದ್ದು, ಮನೆ ಸೀಟುಗಳು ಗಾಳಿಗೆ ಹಾರಿ ಹೋಗಿವೆ. ದ್ವಿಚಕ್ರವಾಹನ ಹಾಗೂ ಕಾರುಗಳ ಮೇಲೆ ಮರದ ಕೊಂಬೆಗಳು ಬಿದ್ದು ವಾಹನಗಳು ಜಖಂ ಆಗಿರುವ ಘಟನೆ ನಡೆದಿದೆ. ಬಿಸಿಲಿನ ತಾಪದಿಂದ ಒಂದೆಡೆ ಜನರು ತಂಪಾಗಿದ್ದರೆ, ಇನ್ನೊಂದೆಡೆ ಮಳೆಯಿಂದಾಗಿ ಹಾನಿಯಾಗಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ತುಮಕೂರು: ಶಾಸಕ ಮುನಿರತ್ನಗೆ ಬುದ್ದಿಭ್ರಮಣೆಯಾಗಿ ಡಿ.ಕೆ. ಹೆಸರು ಹೇಳ್ತಿದ್ದಾರೆ. ಸಿಎಂ ಆಗಲಿಕ್ಕೆ ಇಂತಹ ಕೆಲಸ ಮಾಡಲು ಆಗುತ್ತಾ. ಹಾಗೆ ಮಾಡಿದ್ರೆ ಅವರ ವರ್ಚಸ್ಸು ಕಡಿಮೆಯಾಗಲ್ವಾ ಎಂದು ಎಂದು ಕೆಎಸ್ ಆರ್ಟಿಸಿ ನಿಗಮದ ಅಧ್ಯಕ್ಷ ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್.ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಶಾಸಕ ಮುನಿರತ್ನ ತಲೆ ಕೆಟ್ಟು ಡಿ.ಕೆ.ಶಿವಕುಮಾರ್ ಹೆಸರು ಹೇಳ್ತಾರೆ. ಅವರ ಮೇಲೆ ಕಂಪ್ಲೆಂಟ್ ಆಗಿದೆ. ಎಷ್ಟು ಹೆಣ್ಣು ಮಕ್ಕಳು ದೂರು ಕೊಟ್ಟಿದ್ದಾರೆ, ಎಷ್ಟು ದಿನ ಜೈಲಿಗೆ ಹೋಗಿಬಂದರು ಇದೆಲ್ಲಾ ಗೊತ್ತಿದೆ ಎಂದರು.ಸುಮ್ಮನೆ ಡಿ.ಕೆ.ಶಿವಕುಮಾರ್ ವ್ಯಕ್ತಿತ್ವ ಹರಣ ಮಾಡಲು ಹೀಗೆ ಆರೋಪ ಮಾಡ್ತಾರೆ ಎಂದರು.ಹನಿ ಹುಡುಕಿಕೊಂಡು ಹೋದವರು ಟ್ರ್ಯಾಪ್ ಆಗ್ತಾರೆ, ಸುಮ್ಮನೆ ಇದ್ರೆ ಯಾರು ಬಂದು ಟ್ರ್ಯಾಪ್ ಮಾಡ್ತಾರೆ. ಒಟ್ಟಾರೆ ಹನಿ ಹುಡುಕಿಕೊಂಡು ಹೋದರೆ ಟ್ರ್ಯಾಪ್ ಆಗೋದು ತಿಳಿಸಿದ್ದಾರೆ. ಅವರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದರೆ ಅವರಿಗೆ ಗೊತ್ತಿರುತ್ತೆ. ಅವರು ಹೋಗಿ ದೂರು ಕೊಡಬೇಕು, ತನಿಖೆ ಆಗುತ್ತೆ. 40–50 ಜನರು ಹನಿಟ್ರ್ಯಾಪ್ ಆಗಿದೆ ಎಂದರೆ ಅವರಿಗೆ ಗೊತ್ತಿರುತ್ತೆ. ಅವರು…

Read More