Subscribe to Updates
Get the latest creative news from FooBar about art, design and business.
- ಜಿಲೆಟಿನ್ ಕಡ್ಡಿ ಕಟ್ಟಿಕೊಂಡು ಸ್ಫೋಟಿಸಿಕೊಂಡ ವ್ಯಕ್ತಿ — ತಂದೆ, ಮಗಳು ದಾರುಣ ಸಾವು; ನಾಲ್ವರಿಗೆ ಗಂಭೀರ ಗಾಯ
- ಬೆಂಗಳೂರು ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರಾಜ್ ಹೆಸರು ಔಟ್!
- ಬರದ ಮುನ್ಸೂಚನೆ; ಮುನ್ನೆಚ್ಚರಿಕೆ ವಹಿಸಲು ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
- ಹೀಗೂ ಉಂಟೆ | ಹತ್ತಿಯಲ್ಲೇ ಮೊಳಕೆ ಬಂದ ಮರಿಗಿಡಗಳು, ಮರ ಅಣಬೆ
- ಕಳಚಿತು ಸ್ಟಾರ್ ಹೊಟೇಲ್ ಗಳ ಮುಖವಾಡ: ಕೊಳೆತ ಮಾಂಸ, ಬೂಸ್ಟ್ ಹಿಡಿದ ತರಕಾರಿ, ವಿಷ ಎಣ್ಣೆ ಪತ್ತೆ
- ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’
- ಬೆಳಕುಣಿ (ಚೌದ್ರಿ)–ಮುಂಗನಾಳ ರಸ್ತೆ ಹದಗೆಟ್ಟು ಸಂಚಾರಕ್ಕೆ ಸಂಚಕಾರ: ತಕ್ಷಣ ದುರಸ್ತಿಗೆ ಜೀವನ್ ಮಾಳೆಗೆ ಆಗ್ರಹ
- ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: FIR ದಾಖಲು
Author: admin
ತುಮಕೂರು: ಹದಿನೆಂಟನೆಯ ಶತಮಾನದಲ್ಲೇ ಕಲ್ಯಾಣರಾಜ್ಯದ ಪರಿಕಲ್ಪನೆಯನ್ನು ನನಸಾಗಿಸಿದ ದಿಟ್ಟ ಆಡಳಿತಗಾರ್ತಿ ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಬಲೀಕರಣದ ಅತ್ಯುತ್ತಮ ಮಾದರಿ ಎಂದು ಲೇಖಕ, ವಿದ್ವಾಂಸ ಆಶುತೋಷ್ ಅದೋನಿ ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಕನ್ನಡ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ‘ಅಹಲ್ಯಾಬಾಯಿ ಹೋಳ್ಕರ್ ಅವರ ಜೀವನ ಮತ್ತು ಸಾಧನೆಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಹಲ್ಯಾಬಾಯಿ ಕಾಲದಲ್ಲಿ ಮಾಳ್ವ ಪ್ರದೇಶವು ಭಾರತದ ಅತ್ಯಂತ ಶ್ರೀಮಂತ ರಾಜ್ಯವೆಂದು ಗುರುತಿಸಿಕೊಂಡಿತ್ತು. ತನ್ನ ಪತಿ ಹಾಗೂ ಮಗನನ್ನು ಅಕಾಲದಲ್ಲಿ ಕಳೆದುಕೊಂಡ ಆಕೆ ಅನೇಕ ತೊಂದರೆಗಳನ್ನು ಮೆಟ್ಟಿನಿಂತು ದಕ್ಷ ಆಡಳಿತ ನೀಡಿದಳು. ಏಕಾಂಗಿ ಹೋರಾಟ ಮಾಡಿ ಸುಖೀರಾಜ್ಯವನ್ನು ಸ್ಥಾಪಿಸಿದಳು ಎಂದು ವಿವರಿಸಿದರು. ಅಹಲ್ಯಾಬಾಯಿಯ ಮಾವ ಮಲ್ಹಾರ ರಾವ್ ಆಕೆಯನ್ನು ಗಂಡುಮಕ್ಕಳಿಗೆ ಸರಿಸಮನಾಗಿ ಬೆಳೆಸಿ ರಾಜಕಾರ್ಯಗಳ ಅನುಭವ ನೀಡಿದರು. ಯುದ್ಧವಿದ್ಯೆ, ವಾಕ್ ಚಾತುರ್ಯ, ದೂರದೃಷ್ಟಿ ಎಲ್ಲವನ್ನೂ ಕರಗತ ಮಾಡಿಕೊಳ್ಳುವಂತೆ ಪ್ರೇರಣೆ ನೀಡಿದರು. ಮಹಿಳಾ ಸಬಲೀಕರಣದ ಬಗ್ಗೆ ನಾವು…
ತುಮಕೂರು: ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಮಾರ್ಚ್ 26ರಂದು ತುರುವೇಕೆರೆಯಲ್ಲಿ “ಸಾರ್ವಜನಿಕ ಕುಂದುಕೊರತೆ ಸಭೆ, ಅಹವಾಲು ಸ್ವೀಕಾರ ಸಭೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ”ಯನ್ನು ಏರ್ಪಡಿಸಲಾಗಿದೆ. ಸಭೆಯು ಮಾರ್ಚ್ 26ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತುರುವೇಕೆರೆ ನಗರದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಪೊಲೀಸ್ ಅಧೀಕ್ಷಕರು ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ತುಮಕೂರು: ಬೆಂಗಳೂರು ನಗರ ಜಿಲ್ಲೆ ಮಾಗಡಿ ರಸ್ತೆಯಲ್ಲಿರುವ ಜನಸೇವಾ ವಿದ್ಯಾ ಕೇಂದ್ರದಲ್ಲಿ 2025–26ನೇ ಸಾಲಿಗಾಗಿ 5ನೇ ತರಗತಿ ಕನ್ನಡ ಮಾಧ್ಯಮ ಹಾಗೂ 8ನೇ ತರಗತಿ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಲಿಚ್ಚಿಸುವ ಪ.ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಏಪ್ರಿಲ್ 6ರಂದು ಪರೀಕ್ಷೆ ನಡೆಯಲಿದೆ. ಆಸಕ್ತ ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಲು ಇಚ್ಛಿಸಿದಲ್ಲಿ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ತುಮಕೂರು ಇವರನ್ನು ಮಾರ್ಚ್ 29ರೊಳಗಾಗಿ ಸಂಪರ್ಕಿಸಿ ವಿದ್ಯಾರ್ಥಿಗಳ ಮಾಹಿತಿಯನ್ನು ಒದಗಿಸಬೇಕು. ಅರ್ಹ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಬೇಕೆಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ತುಮಕೂರು: ಸರ್ಕಾರದ ನಿರ್ದೇಶನದನ್ವಯ ಕೆಲಸದ ಸ್ಥಳದಲ್ಲಿ ಮಹಿಳಾ ಸುರಕ್ಷತೆಯನ್ನು ಹೆಚ್ಚಿಸಲು 2 ದಿನದೊಳಗಾಗಿ ಎಲ್ಲ ಇಲಾಖಾ ಕಚೇರಿ ಹಾಗೂ ಅಧೀನ ಕಚೇರಿಗಳಲ್ಲಿ SHE BOX box portal ಅನ್ನು ಸೃಜಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಸುರಕ್ಷಿತ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಆಂತರಿಕ ದೂರು ನಿವಾರಣಾ ಸಮಿತಿಯನ್ನು ರಚಿಸಿ SHE Box ಪೋರ್ಟಲ್‌ನಲ್ಲಿ ಕಾಲೋಚಿತಗೊಳಿಸಬೇಕೆಂದು ನಿರ್ದೇಶನ ನೀಡಿದರು. ಕಚೇರಿ ಮುಖ್ಯಸ್ಥರು ತಮ್ಮ ಕಚೇರಿ ಮತ್ತು ಅಧೀನ ಕಚೇರಿ/ಖಾಸಗಿ ಸಂಸ್ಥೆ/ಕಾರ್ಖಾನೆ, ಶಾಲಾ-ಕಾಲೇಜುಗಳಲ್ಲಿ 10ಕ್ಕಿಂತ ಹೆಚ್ಚು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಕಡ್ಡಾಯವಾಗಿ ಆಂತರಿಕ ದೂರು ನಿವಾರಣಾ ಸಮಿತಿಯನ್ನು ರಚನೆ ಮಾಡಬೇಕು. ಸಮಿತಿ ರಚನೆ ಮಾಡಿದ ಮಾಹಿತಿಯನ್ನು ಪೋರ್ಟಲ್ ವಿಳಾಸ https://shebox.wcd.gov.in/signin ನಲ್ಲಿ ಆಪ್ ಲೋಡ್ ಮಾಡಲು ಕ್ರಮವಹಿಸಬೇಕು ಎಂದು ತಿಳಿಸಿದರು. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) 2013ರ ಕಾಯ್ದೆಯನ್ವಯ…
ತುಮಕೂರು: ಸಹಕಾರ ಸಂಘ/ಸಹಕಾರ ಬ್ಯಾಂಕುಗಳ ಸದಸ್ಯರ ಆರೋಗ್ಯ ರಕ್ಷಣಾ ಹಿತದೃಷ್ಟಿಯಿಂದ ಸರ್ಕಾರದಿಂದ ಅನುಷ್ಟಾನಗೊಳಿಸಿರುವ ಯಶಸ್ವಿನಿ ಆರೋಗ್ಯ ಯೋಜನೆಯಡಿ ನೋಂದಾಯಿಸಿಕೊಳ್ಳಲು ಮಾರ್ಚ್ 31 ಕಡೆಯ ದಿನವಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಹಕಾರ ಸಂಘಗಳು/ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿರುವ ಅರ್ಹ ಸದಸ್ಯರು ಸಂಬಂಧಿಸಿದ ಸಹಕಾರ ಸಂಘ/ಬ್ಯಾಂಕುಗಳ ಮುಖ್ಯ ಕಾರ್ಯನಿರ್ವಾಹಕರನ್ನು ಸಂಪರ್ಕಿಸಿ ಯಶಸ್ವಿನಿ ಯೋಜನೆಯ ವಂತಿಕೆ ಮೊತ್ತವನ್ನು ಪಾವತಿಸಿ ನೋಂದಾಯಿಸಿಕೊಳ್ಳಬಹುದಾಗಿದೆ. ಪ.ಜಾತಿ ಹಾಗೂ ಪ.ಪಂಗಡಗಳಿಗೆ ಸೇರಿದ ಸದಸ್ಯರುಗಳಿಗೆ ವಂತಿಕೆ ಮೊತ್ತವನ್ನು ಪಾವತಿಸುವ ಅವಶ್ಯಕತೆಯಿರುವುದಿಲ್ಲ. ಅರ್ಹ ಸದಸ್ಯರು ಮಾರ್ಚ್ 31ರೊಳಗಾಗಿ ಯಶಸ್ವಿ ಯೋಜನೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಯೋಜನೆಯ ಪ್ರಯೋಜನ ಪಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ತುಮಕೂರು: ಚಿನ್ನಾಭರಣ ದೋಚುವ ಸಲುವಾಗಿ ಮಹಿಳೆಯನ್ನು ಕೊಲೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪುನೀಡಿದೆ. ಅಪರಾಧಿಗಳೆಂದು ಶಿವಕುಮಾರ, ಮಂಜುನಾಥ ಅವರುಗಳನ್ನು ನ್ಯಾಯಾಧೀಶ ಯಾದವ ಕರಕೇರ ತೀರ್ಪು ನೀಡಿದ್ದಾರೆ. ಬಡವನಹಳ್ಳಿ ಪೊಲೀಸ್ ಠಾಣೆ ವ್ಯಾಫ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಫಿಗಳಿಬ್ಬರು 06—06–19 ರಂದು ಕೊಲೆಯಾಗಿರುವ ಗಿರಿಜಮ್ಮ ರವರನ್ನು ಮಧ್ಯಾಹ್ನ 12:30 ಗಂಟೆಯಲ್ಲಿ ತುಂಬಾಡಿಯಿಂದ ಕೆ.ಎ-06-ಡಿ-3279 ಟಾಟಾ ಇಂಡಿಕಾ ವಿಸ್ತಾ ಕಾರಿನಲ್ಲಿ ಗರಣಿ ಹೊಸಕೋಟೆಗೆ ಮಟನ್ ಊಟಕ್ಕೆ ಹೋಗಿಬರೋಣ ಎಂತಾ ಹೇಳಿ ಕರೆದುಕೊಂಡು ಹೋಗಿದ್ದರು. ಅದೇ ದಿವಸ ಸಂಜೆ 06:30 ಗಂಟೆಗೆ ಮಾಯಗೊಂಡನಹಳ್ಳಿ ಕ್ರಾಸ್ ಹತ್ತಿರದ ರಸ್ತೆ ಬದಿಯ ಕೆಂಪಚೆನ್ನೇನಹಳ್ಳಿ ಬಳಿ ಪಾಳು ಜಮೀನಿಗೆ ಕರೆದುಕೊಂಡು ಹೋಗಿದ್ದರು. ಹೊಂಗೆಗಿಡದ ಮರೆಯಲ್ಲಿ ಕಾರುನಿಲ್ಲಿಸಿ ಕಾರಿನಲ್ಲಿಯೇ ಆರೋಪಿಗಳು ಹಗ್ಗವನ್ನು ಗಿರಿಜಮ್ಮಳ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದರು. ಗಿರಿಜಮ್ಮಳ ಎದೆಗೆ ಕಾಲಿನಿಂದ ಒದ್ದು ಕೈಯಿಂದ ಗುದ್ದಿ ಇಬ್ಬರೂ ಸೇರಿ ಕೊಲೆ ಮಾಡಿದ್ದರು. ನಂತರ ಆಕೆಯ ಬಳಿಯಿದ್ದ ಸುಮಾರು…
ಬೆಂಗಳೂರು: ಹನಿಟ್ರ್ಯಾಪ್ ಯತ್ನ ಪ್ರಕರಣ ರಾಜ್ಯದಲ್ಲಿ ರಾಜಕೀಯ ತಿರುವು ಪಡೆದುಕೊಂಡಿದ್ದು, ಪ್ರಭಾವಿ ನಾಯಕನ ಪಾತ್ರದ ಬಗ್ಗೆ ಸಚಿವರು ಮತ್ತು ಶಾಸಕರ ಗುಂಪು ಹೈಕಮಾಂಡ್ ನ್ನು ಭೇಟಿ ಮಾಡಲು ಯೋಜನೆ ರೂಪಿಸಿದೆ ಎನ್ನಲಾಗಿದೆ. ದೂರು ನೀಡುತ್ತೇನೆ ಎನ್ನುತ್ತಿರುವ ಕೆ.ಎನ್.ರಾಜಣ್ಣ, ದೂರು ನೀಡದೇ ವಿಳಂಬ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿ, ಕೋರ್ಟ್ ನಲ್ಲಿ ಬಗೆಹರಿಯಬೇಕಾಗಿದ್ದ ವಿಚಾರ ಸದನದಲ್ಲಿ ಪ್ರಸ್ತಾಪವಾಗಿದ್ದು, ಕೇವಲ ವಿವಾದವಾಗಿಯೇ ಮುಂದುವರಿದಿದೆ. ದೂರು ದಾಖಲಿಸಲು ಕೆ.ಎನ್.ರಾಜಣ್ಣ ವಿಳಂಬ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದೂರು ದಾಖಲಿಸಲಿ ರಾಜಣ್ಣ ವಿಳಂಬ ಮಾಡುತ್ತಿರುವುದೇಕೆ? ಹನಿಟ್ರ್ಯಾಪ್ ಮಾಡಿದ ಆರೋಪಿಗಳು ಇಂತಹವರೇ ಎನ್ನುವುದು ತಿಳಿದಿದ್ದರೂ, ರಾಜಣ್ಣ ಆರೋಪ ಮಾಡಿ ಕಾಲಹರಣ ಮಾಡುತ್ತಿರುವುದೇಕೆ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ಕೊರಟಗೆರೆ: ಹುಟ್ಟುಹಬ್ಬಗಳನ್ನು ಸಾರ್ವಜನಿಕ ಸೇವೆಯನ್ನಾಗಿ ಆಚರಿಸಿದರೆ ಅರ್ಥ ಪೂರ್ಣವಾಗಿರುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಹಾಲಿಂಗಪ್ಪ ತಿಳಿಸಿದರು. ಅವರು ತಮ್ಮ 56 ನೇ ಹುಟ್ಟು ಹಬ್ಬದ ಪ್ರಯುಕ್ತ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು, ಬ್ರೆಡ್, ಹಾಗೂ ಕೋಳಾಲ ಹೋಬಳಿಯ ಹೊಸಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಪಠ್ಯದ ಸಲಕರಣೆಗಳನ್ನು ವಿತರಿಸಿ ಮಾತನಾಡಿ, ನನ್ನ ಹುಟ್ಟು ಹಬ್ಬವನ್ನು ನಮ್ಮ ಸ್ನೇಹಿತರ ಜೊತೆ ಗೂಡಿ ಸಾರ್ವಜನಿಕ ಸೇವೆಯನ್ನಾಗಿ ಮಾಡಿಕೊಂಡಿರುವುದು ಸಂತೋಷ ತಂದಿದೆ, ನಮ್ಮ ಕೊರಟಗೆರೆ ಪಟ್ಟಣದ ಬಸ್ಟಾಂಡ್ ಗೆಳೆಯರ ಬಳಗದ ಬೇಡಿಕೆಯಂತೆ ಸಾರ್ವಜನಿಕರಿಗೆ ಕುಡಿಯುವ ನೀರಿನ ಘಟಕವನ್ನು ನಮ್ಮ ನಾಯಕರಾದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರಿಂದ ಹಾಕಿಸಿ ಕೊಡಲಾಗುವುದು ಮುಂದಿನ ದಿನಗಳಲ್ಲೂ ಸಹ ಸಾರ್ವಜನಿಕ ಸೇವೆಗೆ ಬದ್ದನಾಗಿರುತ್ತೇನೆ ಎಂದರು. ಮಾಜಿ ಜಿಲ್ಲಾ ಪಂಚಾಯಿತಿ ಅದ್ಯಕ್ಷೆ ಪ್ರೇಮ ಮಹಾಲಿಂಗಪ್ಪ ಮಾತನಾಡಿ, ಹಲವು ವರ್ಷಗಳಿಂದ ನಮ್ಮ ಕುಟುಂಬದವರು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದೇವೆ. ಸರ್ಕಾರಿ…
ಕೊರಟಗೆರೆ: ಸರ್ಕಾರ ಒಳ ಮೀಸಲಾತಿ ಜಾರಿ ಮಾಡಿದ್ದಲ್ಲಿ ಸಾಕಷ್ಟು ನಮ್ಮ ಸಮುದಾಯದ ಮುಂದಿನ ಪೀಳಿಗೆಗೆ ಬಹಳ ತೊಂದರೆಯಾಗುತ್ತದೆ ಎಂದು ತಾಲೂಕು ಬಂಜಾರ ಲಂಬಾಣಿ ಸಂಘದ ಖಜಾಂಚಿ ವಿಜಯಶಂಕರ್ ಹೇಳಿದರು. ಅವರು ತಾಲೂಕಿನ ಪಕೀರಪ್ಪನ ಪಾಳ್ಯ ಮೇಗಳ ತಾಂಡದಲ್ಲಿ ಏರ್ಪಡಿಸಿದ್ದ ಬಂಜಾರ ಸಂಘದ ವಾರ್ಷಿಕ ಮಹಾಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾಕಷ್ಟು ಕಷ್ಟಪಟ್ಟು ನಮ್ಮ ಸಮುದಾಯದವರು ಬೆಟ್ಟ ಗುಡ್ಡಗಳಲ್ಲಿ ವಾಸ ಮಾಡಿ ಬಂದವರು, ನಮ್ಮ ಸಮುದಾಯದ ಎಲ್ಲಾ ಯುವಕ ಯುವತಿಯರು ಮುಖ್ಯ ವಾಹಿನಿಗೆ ಬರಬೇಕಾದರೆ ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡಿದರೆ ನಮ್ಮ ಸಮುದಾಯದವರು ದೊಡ್ಡಮಟ್ಟದ ಸಮಸ್ಯೆಗಳನ್ನು ಎದುರಿಸಬೇಕಾಗಿರುತ್ತದೆ. ನಮ್ಮ ತಾಲೂಕಿನಲ್ಲಿ ಮಂಜೂರಾಗಿ ಅಪೂರ್ಣಗೊಂಡಿರುವ ಸಮುದಾಯ ಭವನವನ್ನು ಸಂಬಂಧಪಟ್ಟ ಅಧಿಕಾರಿಗಳು ಪೂರ್ಣಗೊಳಿಸಬೇಕು ಇಲ್ಲವಾದರೆ ಹೋರಾಟದ ಅನಿವಾರ್ಯತೆ ಇದೆ ಎಂದು ಹೇಳಿದರು. ತಾಲೂಕು ಬಂಜಾರ ಲಂಬಾಣಿ ಸಂಘದ ಉಪಾಧ್ಯಕ್ಷ ಹರೀಶ್ ಬಾಬು ಪಿ.ಎಸ್. ಮಾತನಾಡಿ, ನಮ್ಮ ಸಮುದಾಯದವರು ಒಗ್ಗಟ್ಟಾಗಿ ಕೆಲಸ ಮಾಡದೇ ಇದ್ದರೆ ನಮ್ಮ ಮುಂದಿನ ಪೀಳಿಗೆ…
ಮಧುಗಿರಿ: ಸಾರ್ವಜನಿಕರ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ ಹಾಗೂ ಅಧಿಕಾರದ ದರ್ಪ ಎದ್ದು ಕಾಣುತ್ತಿದ್ದು, ಜನಸೇವೆಯ ಮನೋಭಾವ ಕಾಣುತ್ತಿಲ್ಲ ಹಾಗೂ ಇಂದು ಕರೆದಿರುವ ಸಭೆಗೆ ಸಾರ್ವಜನಿಕರು ಬಾರದಿರುವ ಬಗ್ಗೆ ಪ್ರಚಾರದ ಕೊರತೆಯ ಬಗ್ಗೆಗೂ ಲೋಕಾಯುಕ್ತ ಅಧೀಕ್ಷಕ ಲಕ್ಷ್ಮೀನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ನಡೆದ ಲೋಕಾಯುಕ್ತ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಭೆಗೆ ಕನಿಷ್ಟ 10 ದೂರುಗಳು ಬಂದಿಲ್ಲ. ಯಾಕೆ ಸಾರ್ವ ಜನಿಕರಿಗೆ ಮಾಹಿತಿ ನೀಡಿಲ್ಲವೇ ಎಂದು ತಾ.ಪಂ.ಇಓ ರವರನ್ನು ಪ್ರಶ್ನಿಸಿದರು. ಎಲ್ಲ ಇಲಾಖೆಯ ಕಚೇರಿಯಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲು ಸಮಗ್ರ ಮಾಹಿತಿ ಒಳಗೊಂಡ ನಾಮಫಲಕ ಹಾಕಬೇಕಿದ್ದು, ಶೇ.90 ರಷ್ಟು ಇಲಾಖೆಗಳು ಹಾಕಿಲ್ಲ ಸಾರ್ವಜನಿಕರಿಂದ ಬಂದಂತಹ ಅರ್ಜಿಗಳನ್ನು ಅಂದೇ ವಿಲೇವಾರಿ ಮಾಡಿದರೆ ಅರ್ಧ ಕೆಲಸ ಮುಗಿಯುತ್ತದೆ. ಆದರೆ ನೀವು ಬೇಕಂತಲೇ ತಡ ಮಾಡುವುದಲ್ಲದೆ ಅರ್ಜಿಯನ್ನು ವಜಾ ಮಾಡಲು ಕಾರಣ ಹುಡುಕುತ್ತೀರಾ ಬದಲಾಗಿ ಅರ್ಜಿಗೆ ನ್ಯಾಯ ಕೊಡಲು ಮಾರ್ಗ ಹುಡುಕಲ್ಲ. ಈ ಮನೋಭಾವದಿಂದ ನಿಮಗೆ ಇರುವ ಗೌರವ ಹಾಳಾಗಲಿದ್ದು, ಕರ್ತವ್ಯಕ್ಕೆ…